ತುಸುವಾಗಿಯೇ ಬಾ, ತಂಗಾಳಿಯೇ..
ತುಸುವಾಗಿಯೇ ಬಾ,
ತಂಗಾಳಿಯೇ..
ಸರಿಸದಿರು ಮಳೆಯೂಡೆಯನ..
ತಾನೇ ಬರುವ ಮುಂಗಾರಿಗೆ,
ಟಿಸಿಲೊಡೆದ ಮೊಗ್ಗಾಗಿ ಮೊಗ ಚಾಚುವ..
ಮೊದಮೊದಲ ಮಳೆಯ ಆ ಹನಿಯಲಿ,
ಒಂದಾಗಿ ಗರಿ ಬಿಚ್ಚಿದ ನವಿಲಾಗುತಾ..
ಕುಣಿದು ಎಲ್ಲರ ಕುಣಿಸುತಲಿ,
ಸಂಜಯನ ಕೈಬೀಸಿ ತಾಯ ಬಳಿ ಸರಿ ಎನ್ನುತಾ..
ಮೋಡದೊಳಗಿನ ಚಂದಿರಗೆ ಕಾದು ಕುಳಿವ..
ತುಸುವಾಗಿಯೇ ಬಾ,
ತಂಗಾಳಿಯೇ..
-- ರೋಹಿತ್
"ತೀರ"
ಆತ್ಮೀಯ ಒಡನಾಡಿಗಳೇ,
೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.
ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.
ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.
- ರೋಹಿತ್
ತಂಗಾಳಿ ಬೀಸಿದನುಭವ ನೀಡುವಂಥ ಕವಿತೆ..
ReplyDeleteದನ್ಯವಾದಗಳು ಕಾರ್ತಿಕ್...
ReplyDelete