Wednesday, February 17, 2016

ನಮ್ಮ ತಾಯಿ ಭಾರತಿ..

ಗಡಿಯಾಚೆಯ ಹಂತಕರು,
ಒಳಗಿನ ಹುಚ್ಚು ಚಿಂತಕರು..
ಭಯಾನಕರು ಯಾರು ಈ ಇಬ್ಬರೊಳಗೆ??
ತಾಯಿ ಮಡಿಲ ಒಡೆವ ಹಠದಿ,
ಒಂದಾಗಿಹ ಕಪಟ ದೇಶದ್ರೋಹಿಗಳೇ
ಒಂದಿಷ್ಟು ನಮ್ಮ ಮಾತು ನೀವ್ ಕೇಳಿ ಈ ಗಳಿಗೆ..

ಅಸಂಖ್ಯಾತ ಯೋಧರು, ಸ್ವಾತಂತ್ರ್ಯ ತಂದ ವೀರರು
ದುಡಿದು ಕಟ್ಟಿಕೊಟ್ಟ ಪುಣ್ಯಭೂಮಿ ಈ ದೇಶವು
ನಮ್ಮ ನೆಲವ ಚೂರು ಮಾಡೋ ನಿಮ್ಮ ಪ್ರತಿ ಪ್ರಯತ್ನವ
ಹುಸಿ ಮಾಡಲು ನಮ್ಮಯ ರಕ್ತವನ್ನೇ ಕೊಟ್ಟೇವು..

ನಿಮ್ಮ ಪ್ರತಿ ಮನೆ-ಮನದಿ, ಅಫ್ಜಲ್ ಎಂಬ ವಿಷ ಹುಟ್ಟುವುದಾದರೆ
ಆ ರಾಕ್ಷಸನ ಕೊಲ್ಲೋ ಆತ್ಮಸ್ಥೈರ್ಯಕ್ಕೆಲ್ಲಿಲ್ಲಿ ಕೊನೆಯಿದೆ?
ಜನ್ಮವಿತ್ತ ನಾಡ ರಕ್ಷಣೆಗೆ ತೊಡೆ ತಟ್ಟಿ ನಿಂತರೆ
ನಿಮ್ಮಂತಹ ನೀಚ ಪ್ರಾಣಿಗಳಿಗೆಲ್ಲಿ ಇಲ್ಲಿ ಸ್ಥಳವಿದೆ..?

ವೈರಿಯೆಂದಿರಿ ತಾಯಿಯ, ಹುತಾತ್ಮನೆಂದಿರಿ ಕಡುವೈರಿಯ,
ಜರಿದರೀ ದೇಶಕ್ಕಾಗಿ ಜೇವವೀಯೋ ಸೇನೆಯ..
ಭೌದ್ದಿಕತೆಯೇ ನೆಲಕಚ್ಚಿ ಹೋಗಿರಲು ನಿಮ್ಮೊಳಗೆ
ಭಾರತದ ಸಂಸ್ಕೃತಿ ಹರಣ ನಿಮ್ಮಿಂದ ಸಾಧ್ಯವೇ?

ಕಾಶ್ಮೀರ, ಕೇರಳ
ನಮ್ಮ ಮನೆಯ ಅಂಗಳ..
ಮುಟ್ಟುವ ಧೈರ್ಯವಿದ್ದರೆ, ತೋರಿ ನಿಮ್ಮ ಶೌರ್ಯವ..
ಮಾನವತೆ, ಸಹಿಷ್ಣುತೆ ಹೊತ್ತ ಧರತಿ ಭಾರತಿ,
ನಮ್ಮ ತಾಯಿ ಭಾರತಿ..
ಸಹನೆ ಮೀರುವ ಮುನ್ನ ತಿದ್ದಿಕೊಂಡರೆ ಒಳಿತು..
ಇಲ್ಲದಿದ್ದರೆ..
ಅಫ್ಜಲ್ ಗಾಗಿ ಬದುಕಿರುವವರನ್ನು ಅವನ ಬಳಿಗೇ ಕಳುಹಿಸಬೇಕಾದೀತು..

ಗಡಿಯಾಚೆಗಿನ ಹಂತಕರೋ?
ಒಳಗಿನ ಹುಚ್ಚು ಚಿಂತಕರೋ?
ಭಯಾನಕರು ಯಾರು ಹೇಳಿ ಈ ಇಬ್ಬರೊಳಗೆ??

-ರೋಹಿತ್ 


ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...