Tuesday, August 17, 2010

ಮನದ ಎಲೆ.. ಪ್ರೀತಿ ಅಲೆ..


ಹಣ್ಣೆಲೆಯ ಮನಸು ಉದುರಿತು...
ಪ್ರೀತಿಯಲೆಯಲಿ, ನಿರ್ಭಾರತೆಯಲಿ ತೇಲುತಲಿ.. 
ನಿನ್ನ ತಲುಪೋ ಕನಸ ಕಂಡು ಸರಿಯುತಿರೆ ಬಳಿಗೆ..,
ಕಾಣದ ಕೈ ತಿರುಗಿಸಿ ವಾಯುಚಕ್ರವ, ಎಬ್ಬಿಸಿದ ಬಿರುಗಾಳಿಗೆ,
ದೂರಾಗಿ ಕಡೆಗೆ ಬಿದ್ದೆ ನಾ ನಿರಾಸೆಯ ಧೂಳಿಗೆ. 
 - ರೋಹಿತ್
 

2 comments:

  1. geleya.. illi hanneleya manasu andre yaaru athva evudakke holisiddi? aamele "ninna talupo kanasa" anta heluvaaga ninna andre yaavudu?

    ReplyDelete
  2. ಆ ಕವನದ ಸಾರಾಂಶ ಹೀಗಿದೆ ಕಣೋ...

    ನನಗೆ ಈ ಕವನ ಹೊಳೆದಿದ್ದು ಒಂದು ಎಲೆ ತನ್ನ ಮರದಿಂದ ಉದುರಿ ಬಿದ್ದಿದ್ದನು ನೋಡಿದಾಗ...

    ಒಂದು ಎಲೆ ತನ್ನ ಗೂಡ(ಮರ) ತೊರೆದು ಉದುರೊತ್ತೆ... ಹಾಗೇ ಅದು ಕೆಳಗೆ ಬೀಳುವಾಗ ತಾನು ಪ್ರೀತಿಸ್ತಿರೋ ಅಲ್ಲೇ ಪಕ್ಕದಲ್ಲಿದ್ದ ತನ್ನ ಪ್ರೇಮಿಯಾದ ಇನ್ನೊಂದು ಎಲೆ ಕಡೆ ಹೋಗೋ ಕನಸನ್ನ ಕಾಣುತಾ ಪ್ರೀತಿ ಅನ್ನೋ ಗಾಳಿಯಲ್ಲಿ ತೇಲುತ್ತಾ ಹೋಗ್ತಿರೊತ್ತೆ... ಆಗ ಎಲ್ಲಿಂದಲೋ ಎದ್ದ ಬಿರುಗಾಳಿ ಅದನ್ನ ಅದರ ಪ್ರೀತಿ ಇಂದ ದೂರ ಮಾಡಿ ಧೂಳಿಗೆ ಕೆಡವಿ ಹಾಕೊತ್ತೆ...

    ಇದನ್ನ ಎರಡು ತರ ಅರ್ಥ ಮಾಡ್ಕೊಬೋದು......
    ೧. ಪ್ರಕೃತಿಯ ಪ್ರತಿ ಕಣದಲ್ಲೂ ಪ್ರೀತಿ ತುಂಬಿದೆ ಅಂತ, ಹಾಗೇ
    ೨. ಆ ಎಲೆಯನ್ನ ನಮ್ಮ ಮನಸ್ಸು ಅಂತಾನೂ... ಮನಸ್ಸು ಉದುರಿ ತನ್ನ ಪ್ರೀತಿ ಕಡೆ ಹೋಗೋವಾಗ ಕರೆಯದೆ ಬಂದಂತಹ ಸನ್ನಿವೇಶಗಳು ಪ್ರೀತಿ ಇಂದ ದೂರ ಮಾಡಿತು ಅಂತಾನು ಅಂದ್ಕೊಬೋದು..

    ReplyDelete

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...